ನವದೆಹಲಿ: ಈ ಬಾರಿಯ ಐಪಿಎಲ್ 2026ರ 49ನೇ ಪಂದ್ಯದಲ್ಲಿ Sunrisers Hyderabad ವಿರುದ್ಧ Punjab Kings ತಂಡ ಕಳಪೆ ಫಿಲ್ಡಿಂಗ್ ಹಾಗೂ ಬ್ಯಾಟಿಂಗ್ನಿಂದಾಗಿ ಸತತ ಮೂರನೇ ಸೋಲು ಕಂಡಿದೆ. 236 ರನ್ಗಳ ಬೃಹತ್ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಪಂಜಾಬ್ ಹ್ಯಾಟ್ರಿಕ್ ಸೋಲಿನ ಆಘಾತಕ್ಕೆ ಒಳಗಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಕಲೆಹಾಕಿತು. ಆರಂಭದಿಂದಲೇ ಪಂಜಾಬ್ ಬೌಲರ್ಗಳ ಮೇಲೆ ದಾಳಿ ನಡೆಸಿದ ಹೈದರಾಬಾದ್ ಬ್ಯಾಟ್ಸ್ಮನ್ಗಳು ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಗರೆದರು. ಪಂಜಾಬ್ ಫಿಲ್ಡರ್ಗಳು ಮೂರು ಸುಲಭ ಕ್ಯಾಚ್ಗಳನ್ನು ಕೈಚೆಲ್ಲಿದ ಪರಿಣಾಮ ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸೆನ್ ಅವರಿಗೆ ಜೀವದಾನ ಸಿಕ್ಕಿತು. ಇದರ ಲಾಭ ಪಡೆದ ಇಬ್ಬರೂ ಅರ್ಧಶತಕ ಸಿಡಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.
236 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ಗೆ ಆರಂಭದಲ್ಲೇ ಆಘಾತ ಎದುರಾಯಿತು. ಮೊದಲ ಓವರ್ನಲ್ಲೇ ಪ್ಯಾಟ್ ಕಮ್ಮಿನ್ಸ್, ಪ್ರಿಯಾಂಶ್ ಆರ್ಯರನ್ನು 1 ರನ್ಗೆ ಔಟ್ ಮಾಡಿದರು. ಬಳಿಕ ನಿತೀಶ್ ಕುಮಾರ್ ರೆಡ್ಡಿ, ಪ್ರಭ್ಸಿಮ್ರನ್ ಸಿಂಗ್ ಅವರನ್ನು 3 ರನ್ಗೆ ಪೆವಿಲಿಯನ್ಗೆ ಕಳುಹಿಸಿದರು. ನಾಯಕ ಶ್ರೇಯಸ್ ಅಯ್ಯರ್ ಕೂಡ ಕೇವಲ 5 ರನ್ ಗಳಿಸಿ ನಿರಾಸೆ ಮೂಡಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೊಯಿನಿಸ್ 28 ಹಾಗೂ ಸೂರ್ಯಾಂಶ್ ಶೆಡ್ಜ್ 25 ರನ್ ಗಳಿಸಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಕೂಪರ್ ಕೊನೊಲಿ ಶತಕ ಸಿಡಿಸಿ ಗಮನಸೆಳೆದರೂ, ಇತರೆ ಬ್ಯಾಟ್ಸ್ಮನ್ಗಳಿಂದ ಬೆಂಬಲ ಸಿಗದ ಕಾರಣ ಪಂಜಾಬ್ ಸೋಲು ತಪ್ಪಿಸಿಕೊಳ್ಳಲಿಲ್ಲ.
ಈ ಗೆಲುವಿನೊಂದಿಗೆ ಹೈದರಾಬಾದ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಪಂಜಾಬ್ ತಂಡ ಎರಡನೇ ಸ್ಥಾನಕ್ಕೆ ಕುಸಿದಿದೆ.
